ಸರ್ವಾಂಗದೊಳಹೊರಗಿಪ್ಪ ಪರಬ್ರಹ್ಮಲಿಂಗವು
ಕರಕಮಲಕ್ಕೆ ಬಂದಿತು ನೋಡಾ.
ಆ ಲಿಂಗವ ಸಾಧಿಸಿ ಭೇದಿಸಲರಿಯದೆ
ಅನ್ಯದೈವಂಗಳಿಗೆ ಎರಗಿ ಭವಕ್ಕೆ ಗುರಿಯಾದರು ನೋಡಾ.
ಇದು ಕಾರಣ, ಆ ಲಿಂಗವನರಿತು ಪರತತ್ವದಲ್ಲಿ ಕೂಡಿ
ಪರಿಪೂರ್ಣವಾಗಬಲ್ಲಡೆ ಆತನೆ ನಿರ್ಮುಕ್ತ ನೋಡಾ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Sarvāṅgadoḷahoragippa parabrahmaliṅgavu
karakamalakke banditu nōḍā.
Ā liṅgava sādhisi bhēdisalariyade
an'yadaivaṅgaḷige eragi bhavakke guriyādaru nōḍā.
Idu kāraṇa, ā liṅgavanaritu paratatvadalli kūḍi
paripūrṇavāgaballaḍe ātane nirmukta nōḍā
jhēṅkāra nijaliṅgaprabhuve.