Index   ವಚನ - 390    Search  
 
ಆಚಾರವನರಿತು ನಡೆವ ಭಕ್ತನು ಶಿವಾಚಾರಿಯೆಂಬೆನಯ್ಯ. ಆ ಭಕ್ತನ ಅಂಗದ ಒಳಹೊರಗೆ ಲಿಂಗಮಯ ನೋಡಾ. ಅಂತಪ್ಪ ಭಕ್ತನ ಅಂಗವ ಕಂಡು ಎನ್ನ ಮನಕ್ಕೆ ಅಗೋಚರವೆನಿಸಿತ್ತು ನೋಡಾ ಝೇಂಕಾರ ನಿಜಲಿಂಗಪ್ರಭುವೆ.