ಶಿವಭಕ್ತನ ಅಂತರಂಗದಲ್ಲಿ ಭಾವಲಿಂಗವಿಪ್ಪುದು ನೋಡಾ.
ಆ ಭಾವಲಿಂಗದ ಸಂಗದಿಂದ ಪ್ರಾಣಲಿಂಗವಿಪ್ಪುದು ನೋಡಾ.
ಆ ಪ್ರಾಣಲಿಂಗದ ಸಂಗದಿಂದ ಇಷ್ಟಲಿಂಗವಿಪ್ಪುದು ನೋಡಾ.
ಆ ಇಷ್ಟಲಿಂಗಕ್ಕೆ ಗುರುಲಿಂಗಜಂಗಮದ
ಪಾದೋದಕ ಪ್ರಸಾದವ ಅರ್ಪಿಸಿ,
ಪ್ರಾಣಲಿಂಗವ ಕೂಡಿ, ಭಾವಲಿಂಗದಲ್ಲಿ ಬೆರೆದ ಶಿವಭಕ್ತನ
ಎನಗೊಮ್ಮೆ ತೋರಿಸಯ್ಯ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Śivabhaktana antaraṅgadalli bhāvaliṅgavippudu nōḍā.
Ā bhāvaliṅgada saṅgadinda prāṇaliṅgavippudu nōḍā.
Ā prāṇaliṅgada saṅgadinda iṣṭaliṅgavippudu nōḍā.
Ā iṣṭaliṅgakke guruliṅgajaṅgamada
pādōdaka prasādava arpisi,
prāṇaliṅgava kūḍi, bhāvaliṅgadalli bereda śivabhaktana
enagom'me tōrisayya
jhēṅkāra nijaliṅgaprabhuve.