Index   ವಚನ - 408    Search  
 
ಹಸಿವು ತೊರೆದರೇನಯ್ಯ? ಮನದ ಕೊನೆಯ ಮೆಟ್ಟಬೇಕಯ್ಯ. ತೃಷೆ ತೊರೆದರೇನಯ್ಯ? ಮನದ ಕಳವಳವನಳಿಯಬೇಕಯ್ಯ. ನಿದ್ರೆ ತೊರೆದರೇನಯ್ಯ? ಮನದ ಕ್ಷುದ್ರವನಳಿಯಬೇಕಯ್ಯ. ಇಂತೀ ಹಸಿವು ತೃಷೆ ನಿದ್ರೆಯಂಗಳನರಿತು ಮಹಾಕಾರಣದೇಹಿಯಾಗಿ, ಶೂನ್ಯ ನಿಃಶೂನ್ಯ ನಿರಾಳಪೀಠದಲ್ಲಿ ನಿಂದು ನಿರ್ಭರಿತನಾಗಿರ್ದೆ ನೋಡಾ ಝೇಂಕಾರ ನಿಜಲಿಂಗಪ್ರಭುವೆ.