Index   ವಚನ - 417    Search  
 
ವೇದ ಶಾಸ್ತ್ರ ಪುರಾಣ ಆಗಮಂಗಳ ನೋಡಿದರೇನಯ್ಯ? ಗುರು ಉಪದೇಶದಿಂದ ಪ್ರಾಣಲಿಂಗಸಂಬಂಧವನರಿತು ವೇದ ಶಾಸ್ತ್ರ ಪುರಾಣ ಆಗಮಂಗಳನೋದಬಲ್ಲಾತನೆ ನಿಮ್ಮ ಶರಣ ನೋಡಾ ಝೇಂಕಾರ ನಿಜಲಿಂಗಪ್ರಭುವೆ.