Index   ವಚನ - 442    Search  
 
ಶಿವಾತ್ಮಜ್ಞಾನ ಉದಯವಾದ ಮಹೇಶ್ವರನ ಅಂತರಂಗದಲ್ಲಿ ಕಾಮ ಕ್ರೋಧಗಳುಂಟೇನಯ್ಯ? ಲೋಭ ಮೋಹಗಳುಂಟೇನಯ್ಯ? ಮದ ಮತ್ಸರಂಗಳುಂಟೇನಯ್ಯ? ಭ್ರಾಂತು ಸೂತಕಂಗಳುಂಟೇನಯ್ಯ? ಕರ್ಮದೋಷಂಗಳುಂಟೇನಯ್ಯ? ಈ ಅಜ್ಞಾನಕ್ಕೆ ಸಿಲ್ಕದೆ, ತನ್ನ ನಿಲವ ತಾನೇ ನೋಡಿ ನಿರಾಲಂಬಲಿಂಗದೊಳಿಪ್ಪ ಮಹೇಶ್ವರಂಗೆ ಓಂ ನಮೋ ಓಂ ನಮೋ ಓಂ ನಮೋ ಎನುತಿರ್ದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.