ಅಜನಸ್ಥಾನಗಳಿಂದ ನಾಭಿಯ ಪವನವತ್ತಿ
ನಾಶಿಕಾಗ್ರದಲ್ಲಿ ನಿಂದು,
ರವಿ ಶಶಿಯ ಬೆಳಗನೊಳಕೊಂಡು,
ಉನ್ಮನಿಯ ಸ್ಥಾನದಲ್ಲಿ ನಿಂದು,
ನಿರ್ವಿಕಲ್ಪ ನಿತ್ಯಾತ್ಮಕನಾದ ನೋಡಾ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Ajanasthānagaḷinda nābhiya pavanavatti
nāśikāgradalli nindu,
ravi śaśiya beḷaganoḷakoṇḍu,
unmaniya sthānadalli nindu,
nirvikalpa nityātmakanāda nōḍā
jhēṅkāra nijaliṅgaprabhuve.