ಮಾತು-ಮಥನಗಳಿಲ್ಲದೆ, ಜಾತಿ-ಜನನವಿಲ್ಲದೆ,
ಭ್ರಾಂತಿ-ಸೂತಕವಿಲ್ಲದೆ, ನೀತಿ-ನಿರ್ಮಲದಿಂದ ಸುಖಿಸಿ,
ಅತ್ತತ್ತಲೆ ನಿಶ್ಚಿಂತ ನಿರಾಕುಳಲಿಂಗದಲ್ಲಿ
ತಾನು ತಾನಾಗಿಪ್ಪನು ನೋಡಾ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Mātu-mathanagaḷillade, jāti-jananavillade,
bhrānti-sūtakavillade, nīti-nirmaladinda sukhisi,
attattale niścinta nirākuḷaliṅgadalli
tānu tānāgippanu nōḍā
jhēṅkāra nijaliṅgaprabhuve.