Index   ವಚನ - 529    Search  
 
ಹಾಳೂರಲ್ಲಿ ಒಂದು ಕೋಡಗ ಕುಳಿತಿರುವುದ ಕಂಡೆನಯ್ಯ. ಆ ಕೋಡಗನ ತಲೆಯ ಮೇಲೆ ಒಂದು ರತ್ನವಿಪ್ಪುದು ನೋಡಾ. ಆ ರತ್ನವ ಒಬ್ಬ ಭಾಮಿನಿಯು ಕಂಡು, ಆ ಕೋಡಗನ ಕೊಂದು, ಆ ರತ್ನವ ತಕ್ಕೊಂಡ ಸೋಜಿಗವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.