ನಡೆದು ನಡೆದು ಬಯಲಾದುದ ಕಂಡೆನಯ್ಯ.
ನುಡಿದು ನುಡಿದು ಬಯಲಾದುದ ಕಂಡೆನಯ್ಯ.
ನೋಡಿ ನೋಡಿ ಬಯಲಾದುದ ಕಂಡೆನಯ್ಯ.
ಮಾಡಿ ಮಾಡಿ ಬಯಲಾದುದ ಕಂಡೆನಯ್ಯ.
ಕೇಳಿ ಕೇಳಿ ಬಯಲಾದುದ ಕಂಡೆನಯ್ಯ.
ಬಯಲಿಂಗೆ ಬಯಲು ನಿರ್ವಯಲಾದುದ ಕಂಡೆನಯ್ಯ.
ಇಂತಪ್ಪ ಭೇದವನರಿತು ಇರಬಲ್ಲಡೆ
ಆತನೇ ಭಾವಲಿಂಗಸಂಬಂಧಿ ಕಾಣಾ
ಝೇಂಕಾರ ನಿಜಲಿಂಗಪ್ರಭುವೆ.