ಕರ್ಮದೋಷಂಗಳ ಹರಿದು,
ಕನಸು ಕಳವಳಂಗಳನಳಿದು,
ನಿರ್ಮಲವ ಕೂಡಿ, ನಿಜವ ಲಾಲಿಸಿ,
ಪರಮಾನಂದದೊಳು ಕೂಡಿ,
ನಿರ್ಮಳಾತ್ಮಕನ ಪಾಡಿ,
ಪರಬ್ರಹ್ಮಲಿಂಗದೊಳು ಕೂಡಿ,
ಪರಕೆ ಪರವನಾಚರಿಸಿದನಯ್ಯ ನಿಮ್ಮ ಶರಣನು
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Karmadōṣaṅgaḷa haridu,
kanasu kaḷavaḷaṅgaḷanaḷidu,
nirmalava kūḍi, nijava lālisi,
paramānandadoḷu kūḍi,
nirmaḷātmakana pāḍi,
parabrahmaliṅgadoḷu kūḍi,
parake paravanācarisidanayya nim'ma śaraṇanu
jhēṅkāra nijaliṅgaprabhuve.