ಹೃದಯದಲ್ಲಿಪ್ಪ ಅಂಜನವ ತೆಗೆದು
ನಿರಂಜನವೆಂಬ ಜ್ಯೋತಿಯ ಮುಟ್ಟಿಸಲು
ಆ ಜ್ಯೋತಿಯ ಬೆಳಗಿನೊಳಗೆ
ಸರ್ವ ಬ್ರಹ್ಮಾಂಡಂಗಳಡಗಿಪ್ಪ ಸೋಜಿಗವ ನೋಡಾ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Hr̥dayadallippa an̄janava tegedu
niran̄janavemba jyōtiya muṭṭisalu
ā jyōtiya beḷaginoḷage
sarva brahmāṇḍaṅgaḷaḍagippa sōjigava nōḍā
jhēṅkāra nijaliṅgaprabhuve.