Index   ವಚನ - 550    Search  
 
ಸುಟ್ಟಸುಡುಗಾಡಿನೊಳಗೊಬ್ಬ ಬಟ್ಟಬಯಲಾದ ಹೆಂಗಸು ಹುಟ್ಟಿ ಐವರ ಸಂಗವ ಮಾಡುತಿರ್ಪಳು ನೋಡಾ. ದೃಷ್ಟದಿಂದ ನೆಟ್ಟನೆ ಅಖಂಡಲಿಂಗಾರ್ಚನೆಯ ಮಾಡುತಿರ್ಪಳು ನೋಡಾ ಝೇಂಕಾರ ನಿಜಲಿಂಗಪ್ರಭುವೆ.