Index   ವಚನ - 563    Search  
 
ಹಾದಿಯಲ್ಲಿ ಬಿದ್ದಿಪ್ಪ ಮಾಣಿಕ್ಯವ ಕಂಡೆನಯ್ಯ. ಆ ಮಾಣಿಕ್ಯವ ಸಾಧಿಸಿ ಭೇದಿಸಿ ನೋಡುತಿಪ್ಪಳು ಒಬ್ಬ ಸತಿಯಳು. ಆ ಸತಿಯಳ ಸಂಗದಿಂದ ಮುಕ್ತಿಸಾಮ್ರಾಜ್ಯಕೆ ಹೋಗಿ ನಿರ್ವಿಕಲ್ಪ ನಿತ್ಯಾತ್ಮಕನಾದೆ ನೋಡಾ ಝೇಂಕಾರ ನಿಜಲಿಂಗಪ್ರಭುವೆ.