Index   ವಚನ - 565    Search  
 
ಆತ್ಮನೆಂಬ ಪ್ರಭೆಯಲ್ಲಿ ತ್ರಿಕೂಟಶಿವಾಲಯವ ಕಂಡೆನಯ್ಯ. ಆ ಶಿವಾಲಯದೊಳಗೊಬ್ಬ ಪುರುಷನು ಪವನಧ್ಯಾನ ಲಿಂಗಧ್ಯಾನವಂ ಮಾಡಿ ರವಿ ಶಶಿಯ ಬೆಳಗನೊಳಕೊಂಡು ತಾನುತಾನಾಗಿಪ್ಪ ನೋಡಾ ಝೇಂಕಾರ ನಿಜಲಿಂಗಪ್ರಭುವೆ.