Index   ವಚನ - 576    Search  
 
ಸುಂದರವಾದ ಮೇರುವೆಯೊಳಗೆ ಮದನಗಿತ್ತಿಯು ಮದಕರಿಗಳ ಕೊಂದು ಸದಮಲ ಬೆಳಗಿನೊಳು ನಿಂದು ಮಹಾಜ್ಞಾನವೆಂಬ ನಿಧಾನವ ಪಿಡಿದು ಸ್ವಯಜ್ಞಾನಿಯ ಸಂಗವ ಮಾಡಿ ಪರಿಪೂರ್ಣವಾಗಿ ನಿರವಯಸ್ಥಲವನೈದಿದ ಸೋಜಿಗವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.