ಸರ್ವಬ್ರಹ್ಮಾಂಡವ ಒಬ್ಬ ದೇವ ನುಂಗಿಕೊಡಿಪ್ಪ ನೋಡಾ.
ಆ ದೇವನ ನೆನಹಿನಿಂದ ಪರಶಿವನಾದ.
ಆ ಪರಶಿವನ ಸಂಗದಿಂದ ಸದಾಶಿವನಾದ.
ಆ ಸದಾಶಿವನ ಸಂಗದಿಂದ ಈಶ್ವರನಾದ.
ಆ ಈಶ್ವರನ ಸಂಗದಿಂದ ರುದ್ರನಾದ.
ಆ ರುದ್ರನ ಸಂಗದಿಂದ ವಿಷ್ಣುವಾದ.
ಆ ವಿಷ್ಣುವಿನ ಸಂಗದಿಂದ ಬ್ರಹ್ಮನಾದ
ಆ ಬ್ರಹ್ಮನ ಸಂಗದಿಂದ ಸಕಲ ಜಗಂಗಳು
ಉತ್ಪತ್ತಿಯಾದವು ನೋಡಾ
ಝೇಂಕಾರ ನಿಜಲಿಂಗಪ್ರಭುವೆ.