Index   ವಚನ - 595    Search  
 
ಕರ್ಮದೋಷಂಗಳ ಪರಿಹಾರವಂ ಮಾಡಿ ನಿರ್ಮಲ ಆತ್ಮವ ನೋಡಿ ಪರಮಾನಂದ ಪ್ರಕೃತಿಯೊಳು ಕೂಡಿ ಪರಕ್ಕೆ ಪರವನೈದಬಲ್ಲರೆ ಆತನೇ ನಿರ್ಮುಕ್ತ ಶರಣ ನೋಡಾ ಝೇಂಕಾರ ನಿಜಲಿಂಗಪ್ರಭುವೆ.