Index   ವಚನ - 601    Search  
 
ಕಾಯದ ಕರಣಂಗಳನಳಿದು ಗುರುಸಂಬಂಧಿಯಾದನಯ್ಯ ಜೀವದ ಕರಣಂಗಳನಳಿದು ಲಿಂಗಸಂಬಂಧಿಯಾದನಯ್ಯ. ಪ್ರಾಣದ ಕರಣಂಗಳನಳಿದು ಜಂಗಮಸಂಬಂಧಿಯಾದನಯ್ಯ. ಇಂತೀ ತ್ರಿವಿಧ ಸಂಬಂಧವನಳಿದು ಮಹಾಸಂಬಂಧಿಯಾದನಯ್ಯ ನಿಮ್ಮ ಶರಣನು ಝೇಂಕಾರ ನಿಜಲಿಂಗಪ್ರಭುವೆ.