ಎನ್ನ ಕಾಯವೆಂಬ ಸಿಂಹಾಸನದಲ್ಲಿ
ಪ್ರಾಣವೆಂಬ ಲಿಂಗವ ಮೂರ್ತಗೊಳಿಸಿ,
ಧ್ಯಾನವೆಂಬ ಹಸ್ತದಲ್ಲಿ ಮು[ಟ್ಟಿ] ಪೂಜಿಸುತ್ತಿರಲು,
ಮೆಲ್ಲಮೆಲ್ಲನ ಸುತ್ತಿ ಮುತ್ತಿದ ಸಂಸಾರ,
ಬಯಲ ಬೆರಸಿ, ನಾ ನೀನೆಂಬ ಭೇದವಳಿದು,
ಮಹಾದಾನಿ ಗುಹೇಶ್ವರನ ನೋಡಲಾಗಿ
ನಿಜಲಿಂಗವಾಯಿತ್ತು.
Transliteration Enna kāyavemba sinhāsanadalli
prāṇavemba liṅgava mūrtagoḷisi,
dhyānavemba hastadalli mu[ṭṭi] pūjisuttiralu,
mellamellana sutti muttida sansāra,
bayala berasi, nā nīnemba bhēdavaḷidu,
mahādāni guhēśvarana nōḍalāgi
nijaliṅgavāyittu.
Hindi Translation मेरे काया जैसे सिंहासन पर
प्राण जैसे लिंग स्थापित कर,
ध्यान जैसे हस्त में छिपाकर पूजा करते रहने से,
धीरे धीरे घूमे आक्रमित परिवार शून्य मिलाकर,
मैं तू जैसा भेद मिठकर
महादानि गुहेश्वर को देखने से निजलिंग हुआ था ।
Translated by: Eswara Sharma M and Govindarao B N