Index   ವಚನ - 630    Search  
 
ಹುಟ್ಟಿಲ್ಲದ ನಾರಿ, ಹೊಂದಿಲ್ಲದ ಪುರುಷನ ಸಂಗವ ಮಾಡಿ, ಐವರ ಮಕ್ಕಳ ಹಡೆದು, ನೀರಿಲ್ಲದ ಹೊಳೆಗೆ ಹೋಗಿ, ಬರಿಯ ಬಯಲನೆ ಸುತ್ತಿ, ಬರಿದಾದ ಮನೆಗೆ ಹೋದಳು ನೋಡಾ ಝೇಂಕಾರ ನಿಜಲಿಂಗಪ್ರಭುವೆ.