Index   ವಚನ - 641    Search  
 
ನಾಲ್ಕು ಕಂಬದ ಗುಡಿಗೆ ಇಪ್ಪತ್ತೈದು ರತ್ನಂಗಳ ಕೆತ್ತಿಸಿ, ಮಹಾಜ್ಞಾನವೆಂಬ ಶಿಖರವನಿಕ್ಕಿ, ಪರಂಜ್ಯೋತಿಯೆಂಬ ಲಿಂಗಾರ್ಚನೆಯಂ ಮಾಡಿ ಪರಕೆಪರವಾದ ಸೋಜಿಗವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.