Index   ವಚನ - 645    Search  
 
ಶರೀರವೆಂಬ ಆಲಯದೊಳಗೆ ಮೂವರು ಭಾಮಿನಿಯರ ಕಂಡೆನಯ್ಯ. ಒಂದು ಭಾಮಿನಿಯ ಹಿಡಿದಾತ ಮರ್ತ್ಯಕೆ ಒಳಗಾದ. ಒಂದು ಭಾಮಿನಿಯ ಹಿಡಿದಾತ ಮರ್ತ್ಯಾತೀತನಾದ. ಒಂದು ಭಾಮಿನಿಯ ಹಿಡಿದಾತ ನಿರ್ವಯಲವೆರಸಿ ನಿಶ್ಚಿಂತ ನಿರಾಳವಾದ ನೋಡಾ ಝೇಂಕಾರ ನಿಜಲಿಂಗಪ್ರಭುವೆ.