Index   ವಚನ - 670    Search  
 
ಆರು ಚಕ್ರಂಗಳಲ್ಲಿ ಆರು ಮೂರ್ತಿಗಳ ಕಂಡೆನಯ್ಯ, ಆರು ಶಕ್ತಿಯರು ಆರಾರ ಲಿಂಗಾರ್ಚನೆಯಂ ಮಾಡಿ ಆರರಿಂದತ್ತತ್ತ ಮೀರಿದ ಮಹಾಮಹಿಮನ ಕಂಡು ಧನ್ಯನಾದೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.