Index   ವಚನ - 677    Search  
 
ನಾದದೊಳಗಣ ನಾದವ ತೋರಿಸಯ್ಯ. ಕಂಗಳೊಳಗಣ ಮಂಗಳಪ್ರಭೆಯ ತೋರಿಸಯ್ಯ. ಸೋಮಸೂರ್ಯರ ನುಂಗಿದ ಪರಮನ ತೋರಿಸಯ್ಯ. ಇಂತೀ ತ್ರಿವಿಧವ ಬಲ್ಲ ಪರಮಶರಣನ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.