Index   ವಚನ - 683    Search  
 
ನಾದದೊಳಗಣ ಚಿನ್ನಾದವ ತೋರಿಸಯ್ಯ. ಬಿಂದುವೊಳಗಣ ಚಿದ್ಬಿಂದುವ ತೋರಿಸಯ್ಯ. ಕಲೆಯೊಳಗಣ ಚಿತ್ಕಲೆಯ ತೋರಿಸಯ್ಯ. ಪತಿಯೊಳಗಣ ಮಹಾನಿಷ್ಪತಿಯ ತೋರಿಸಯ್ಯ. ಇಂತೀ ಚತುರ್ಭೇದವ ಬಲ್ಲ ಮಹಾಶರಣನ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.