Index   ವಚನ - 695    Search  
 
ಸಾವಿರೆಸಳಮಂಟಪದಲ್ಲಿ ಒಬ್ಬ ಸತಿಯಳು ನಿಂದಿರುವುದ ಕಂಡೆನಯ್ಯ. ಆ ಸತಿಯಳ ಅಂಗದಲ್ಲಿ ಇಪ್ಪತ್ತೈದು ಶಿವಾಲಯವ ಕಂಡೆನಯ್ಯ. ಆ ಶಿವಾಲಯದೊಳಗೊಬ್ಬ ಪುರುಷನು ಐವರ ಕೂಡಿಕೊಂಡು ಆ ಸತಿಯಳ ಸಂಗದಿಂದ ಚಿದುಲಿಂಗಾರ್ಚನೆಯಂ ಮಾಡಿ ಚಿದ್ಘನಸ್ವರೂಪನಾದ ಸೋಜಿಗವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.