Index   ವಚನ - 709    Search  
 
ಸಾವಿರ ಕಂಬದ ಮುತ್ತಿನಮಂಟಪದೊಳಗೆ ಒಬ್ಬ ಸತಿಯಳು ನಿಂದಿರುವುದ ಕಂಡೆನಯ್ಯ. ಆ ಸತಿಯಳ ಸಂಗದಿಂದ ಸತ್ತುಚಿತ್ತಾನಂದ ನಿತ್ಯಪರಿಪೂರ್ಣವೆಂಬ ಐದಂಗವ ಗರ್ಭೀಕರಿಸಿ ಕೊಂಡು ನಿರಂಜನ ದೇಶಕೆ ಹೋಗಿ ನಿರಪೇಕ್ಷಲಿಂಗದಲ್ಲಿ ಕೂಡಿ ನಿಸ್ಸಂಗಿ ನಿರಾಳನಾದೆ ನೋಡಾ ಝೇಂಕಾರ ನಿಜಲಿಂಗಪ್ರಭುವೆ.