ವಚನ - 983     
 
ಎರಡೊಂದು ಮುಕ್ಕೂಟದೊಳು ಲಿಂಗದೆಡೆಯಾಟವಿರಲು, ಬೀಜಕ್ಷೇತ್ರದೆರಕ ಹರಿಹರಯೋಗ. ವಿರತರತಿ ನಿಕ್ಷೇಪವಿದುವೆ ಗರ್ಭಾದಾನ. ಪರಮಬೀಜಾವಾಪವಿದರ ಫಲನಿರ್ವಾಣ! ಸರಸಲಿಂಗದ ನಿಷೇಕವನರಿವುದೆ ಸಾಜ, ಗುರುವೆ ಕರುಣಿಸಿದ ಶಿವಲಿಂಗಕಮಲಾರ್ಚನೆಯನು. ಇದು ಗುಹ್ಯ ಗುಹೇಶ್ವರಾ.