Index   ವಚನ - 733    Search  
 
ಆಕಾರಲಿಂಗದ ಸಂಗದಿಂದ ನಿರಾಕಾರಲಿಂಗವ ಕಂಡೆನಯ್ಯ. ಆ ನಿರಾಕಾರ ಲಿಂಗದ ಸಂಗದಿಂದ ನಿರಾಕುಳಲಿಂಗವ ಕಂಡೆನಯ್ಯ. ಆ ನಿರಾಕುಳಲಿಂಗದ ಸಂಗದಿಂದ ನಿರಂಜನಲಿಂಗವ ಕಂಡೆನಯ್ಯ. ಆ ನಿರಂಜನಲಿಂಗದ ಸಂಗದಿಂದ ನಿರಾಳಲಿಂಗವ ಕಂಡೆನಯ್ಯ. ಆ ನಿರಾಳಲಿಂಗದ ಸಂಗದಿಂದ ನಿಃಕಲಲಿಂಗವ ಕಂಡೆನಯ್ಯ. ಆ ನಿಃಕಲಲಿಂಗದ ಸಂಗದಿಂದ ಝೇಂಕಾರ ನಿಜಲಿಂಗಪ್ರಭುವೆ ನಿಮ್ಮ ಕಂಡೆನಯ್ಯ.