ಕುಲಛಲಕ್ಕೆ ಹೋರಿ ಆಡುವರೆಲ್ಲ ಶಿವಭಕ್ತರೆ?
ಶಿವಭಕ್ತರಲ್ಲ ; ಅವರು ಕುಲದ ಪಾತಕರು.
ಅವರಿಂಗೆ ಗುರುವಿಲ್ಲ, ಲಿಂಗವಿಲ್ಲ, ಜಂಗಮವಿಲ್ಲ,
ಪಾದೋದಕ-ಪ್ರಸಾದವಿಲ್ಲ, ವಿಭೂತಿ-ರುದ್ರಾಕ್ಷಿಯಿಲ್ಲ,
ಓಂ ನಮಃ ಶಿವಾಯವೆಂಬ ಮಂತ್ರವಿಲ್ಲ.
ಇಂತೀ ಕುಲ ಛಲಂಗಳ ಬಿಟ್ಟು, ನಿರ್ಮಲಸ್ವರೂಪನಾಗಿ,
ಗುರುಕಾರುಣ್ಯದಿಂದ ಜ್ಞಾನಸಂಬಂಧಿಯಾಗಿ,
ಅಷ್ಟಾವರಣವನಾಚರಿಸಬಲ್ಲಾತನೆಭಕ್ತನೆಂಬೆನಯ್ಯ,
ಮಹೇಶ್ವರನೆಂಬೆನಯ್ಯ,
ಪ್ರಸಾದಿಯೆಂಬೆನಯ್ಯ, ಪ್ರಾಣಲಿಂಗಿಯೆಂಬೆನಯ್ಯ,
ಶರಣನೆಂಬೆನಯ್ಯ, ಐಕ್ಯನೆಂಬೆನಯ್ಯ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Kulachalakke hōri āḍuvarella śivabhaktare?
Śivabhaktaralla; avaru kulada pātakaru.
Avariṅge guruvilla, liṅgavilla, jaṅgamavilla,
pādōdaka-prasādavilla, vibhūti-rudrākṣiyilla,
ōṁ namaḥ śivāyavemba mantravilla.
Intī kula chalaṅgaḷa biṭṭu, nirmalasvarūpanāgi,
gurukāruṇyadinda jñānasambandhiyāgi,
aṣṭāvaraṇavanācarisaballātanebhaktanembenayya,
mahēśvaranembenayya,
prasādiyembenayya, prāṇaliṅgiyembenayya,
śaraṇanembenayya, aikyanembenayya
jhēṅkāra nijaliṅgaprabhuve.