Index   ವಚನ - 754    Search  
 
ಆತ್ಮನೆಂಬ ಬೆಳಗಿನಿಂದತ್ತತ್ತ ನಿರಾತ್ಮನೆಂಬ ಲಿಂಗವು, ಅನಂತಕೋಟಿ ಸೋಮಸೂರ್ಯರ ಬೆಳಗನೊಳಕೊಂಡು, ಸತ್ತುಚಿತ್ತಾನಂದನಿತ್ಯಪರಿಪೂರ್ಣವೆಂಬ ಐದಂಗವ ಗರ್ಭೀಕರಿಸಿಕೊಂಡು ಚಿದಾನಂದಸ್ವರೂಪ ತಾನೇ ನೋಡಾ ಝೇಂಕಾರ ನಿಜಲಿಂಗಪ್ರಭುವೆ.