ಪರಶಿವತತ್ವದಿಂದ ಪರಮಜ್ಞಾನಿಯಾಗಿ,
ಆ ಪರಾಪರಜ್ಞಾನದಿಂದ ಅಗಮ್ಯ ಅಗೋಚರ
ಅಪ್ರಮಾಣ ನಿಶ್ಚಿಂತ ನಿರಾಕುಳ
ನಿರ್ಭರಿತನಾದ ಸೋಜಿಗವ ನೋಡಾ.
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Paraśivatatvadinda paramajñāniyāgi,
ā parāparajñānadinda agamya agōcara
apramāṇa niścinta nirākuḷa
nirbharitanāda sōjigava nōḍā.
Jhēṅkāra nijaliṅgaprabhuve.