ಅಂಬರದ ಮನೆಯೊಳಗೆ
ಗಾಂಭೀರ್ಯತ್ವದ ಅಂಗನೆಯ ಕಂಡೆನಯ್ಯ.
ಆಕೆಯ ಸಂಗದಿಂದ
ಸತ್ತುಚಿತ್ತಾನಂದ ನಿತ್ಯಪರಿಪೂರ್ಣವೆಂಬ
ಐದಂಗವ ಗರ್ಭೀಕರಿಸಿಕೊಂಡು
ಪರವಶದಲ್ಲಿ ನಿಂದು, ಪರಕೆ ಪರವನೈದಿದ ನೋಡಾ
ಝೇಂಕಾರ ನಿಜಲಿಂಗಪ್ರಭುವೆ.
Art
Manuscript
Music
Courtesy:
Transliteration
Ambarada maneyoḷage
gāmbhīryatvada aṅganeya kaṇḍenayya.
Ākeya saṅgadinda
sattucittānanda nityaparipūrṇavemba
aidaṅgava garbhīkarisikoṇḍu
paravaśadalli nindu, parake paravanaidida nōḍā
jhēṅkāra nijaliṅgaprabhuve.