Index   ವಚನ - 777    Search  
 
ಆಚಾರಲಿಂಗ ಗುರುಲಿಂಗದಲ್ಲಿ ಅಡಗಿ, ಆಚಾರಲಿಂಗ ಗುರುಲಿಂಗ ಶಿವಲಿಂಗದಲ್ಲಡಗಿ, ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗದಲ್ಲಡಗಿ, ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗದಲ್ಲಿ ಅಡಗಿ, ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗದಲ್ಲಿ ಅಡಗಿ, ಆಚಾರಲಿಂಗ ಗುರುಲಿಂಗ, ಶಿವಲಿಂಗ, ಜಂಗಮಲಿಂಗ, ಪ್ರಸಾದಲಿಂಗ, ಮಹಾಲಿಂಗ ನಿತ್ಯನಿಜದಲ್ಲಿ ಅಡಗಿ, ಅತ್ತತ್ತಲೆ ಚಿದ್ಘನ ಚಿದಾನಂದ ಚಿನ್ಮಯ ನಿಷ್ಕಳಂಕ ನಿರವಯ ಲಿಂಗ ತಾನೆ ನೋಡಾ, ಝೇಂಕಾರ ನಿಜಲಿಂಗಪ್ರಭುವೆ.