ಅಂಥ ಬ್ರಹ್ಮಾಂಡವ ಆರುಸಾವಿರದೈವತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಊರ್ಧ್ವಗಾಮಿನಿಯೆಂಬ ಭುವನ.
ಆ ಭುವನದೊಳು ಊರ್ಧ್ವಪಾದನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ಮೂವತ್ತುಕೋಟಿ ಬ್ರಹ್ಮ ನಾರಾಯಣ ರುದ್ರರು ಇಂದ್ರಚಂದ್ರಾದಿತ್ಯರು,
ಮೂವತ್ತುಕೋಟಿ ವೇದಪುರುಷರು ಮುನೀಂದ್ರರು,
ಮೂವತ್ತೊಂಬತ್ತುಕೋಟಿ ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Antha brahmāṇḍava ārusāviradaivatteṇṭu
brahmāṇḍavanoḷakoṇḍudondu ūrdhvagāminiyemba bhuvana.
Ā bhuvanadoḷu ūrdhvapādanemba rudramūrti ihanu.
Ā rudramūrtiya ōlagadalli
mūvattukōṭi brahma nārāyaṇa rudraru indracandrādityaru,
mūvattukōṭi vēdapuruṣaru munīndraru,
mūvattombattukōṭi dēvarkaḷiharu nōḍā
apramāṇakūḍalasaṅgamadēvā.