Index   ವಚನ - 18    Search  
 
ಅಂಥ ಬ್ರಹ್ಮಾಂಡವ ಹದಿನಾರುಸಾವಿರದ ನೂರಾಐವತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ಅಚಿಂತ್ಯವೆಂಬ ಭುವನ. ಆ ಭುವನದೊಳು ತ್ರಿಲೋಚನನೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಎಂಬತ್ತು ಕೋಟಿ ಇಂದ್ರ ಬ್ರಹ್ಮ ನಾರಾಯಣರು, ಎಂಬತ್ತುಕೋಟಿ ಇಂದ್ರಚಂದ್ರಾದಿತ್ಯರು, ಎಂಬತ್ತುಕೋಟಿ ವೇದಪುರುಷರು, ಮುನೀಂದ್ರರು ದೇವರ್ಕಳಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.