Index   ವಚನ - 20    Search  
 
ಅಂಥ ಬ್ರಹ್ಮಾಂಡವ ಹದಿನೆಂಟುಸಾವಿರದ ನೂರಾ ಎಪ್ಪತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ವಾಮದೇವವೆಂಬ ಭುವನ. ಆ ಭುವನದೊಳು ಷಟ್ಪಾದನೆಂಬ ಮಹಾರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ತೊಂಬತ್ತುಕೋಟಿ ರುದ್ರ ಬ್ರಹ್ಮ ನಾರಾಯಣರು, ಇಂದ್ರಚಂದ್ರಾದಿತ್ಯರು. ತೊಂಬತ್ತುಕೋಟಿ ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.