Index   ವಚನ - 27    Search  
 
ಅಂಥ ಬ್ರಹ್ಮಾಂಡವ ಇಪ್ಪತ್ತೈದುಸಾವಿರ ಇನ್ನೂರಾನಾಲ್ವತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ಏಕರುದ್ರವೆಂಬ ಭುವನ. ಆ ಭುವನದೊಳು ಕಾಲಾಂತಕನೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ನೂರಾ ಇಪ್ಪತ್ತೈದುಕೋಟಿ ಬ್ರಹ್ಮ ನಾರಾಯಣ ರುದ್ರರು, ಇಂದ್ರಚಂದ್ರಾದಿತ್ಯರು, ನೂರಾ ಇಪ್ಪತ್ತೈದುಕೋಟಿ ವೇದಪುರುಷರು, ಮುನೀಂದ್ರರು, ದೇವರ್ಕಳಿಹರು ನೋಡಾ, ಅಪ್ರಮಾಣಕೂಡಸಂಗಮದೇವಾ.