ಅಂಥ ಬ್ರಹ್ಮಾಂಡವ ಮೂವತ್ತುಸಾವಿರ ಇನ್ನೂರತೊಂಬತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ವಾಮಜೇಷ್ಠವೆಂಬ ಭುವನ.
ಆ ಭುವನದೊಳು ವಾಮದೇವನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ನೂರಾಐವತ್ತುಕೋಟಿ ರುದ್ರ ಬ್ರಹ್ಮ ನಾರಾಯಣರು,
ಇಂದ್ರಚಂದ್ರಾದಿತ್ಯರು,
ನೂರಾನಾಲ್ವತ್ತುಕೋಟಿ, ವೇದಪುರುಷರು,ಮುನೀಂದ್ರರು,
ದೇವರ್ಕಳಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Antha brahmāṇḍava mūvattusāvira innūratombatteṇṭu
brahmāṇḍavanoḷakoṇḍudondu vāmajēṣṭhavemba bhuvana.
Ā bhuvanadoḷu vāmadēvanemba rudramūrti ihanu.
Ā rudramūrtiya ōlagadalli
nūrā'aivattukōṭi rudra brahma nārāyaṇaru,
indracandrādityaru,
nūrānālvattukōṭi, vēdapuruṣaru,munīndraru,
dēvarkaḷiharu nōḍā
apramāṇakūḍalasaṅgamadēvā.