Index   ವಚನ - 61    Search  
 
ಅಂಥ ಬ್ರಹ್ಮಾಂಡವ ಐವತ್ತೊಂಬತ್ತುಸಾವಿರದ ಐನೂರಾ ಎಂಬತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ಅಜವೆಂಬ ಭುವನ. ಆ ಭುವನದೊಳು ಅಜಕಪಾಲಿಯೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಇನ್ನೂರಾ ತೊಂಬತ್ತೈದುಕೋಟಿ ರುದ್ರ-ಬ್ರಹ್ಮ-ನಾರಾಯಣರಿಹರು. ಇನ್ನೂರಾ ತೊಂಬತ್ತೈದುಕೋಟಿ ಇಂದ್ರಚಂದ್ರಾದಿತ್ಯರಿಹರು ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ ಆಪ್ರಮಾಣಕೂಡಲಸಂಗಮದೇವಾ.