Index   ವಚನ - 63    Search  
 
ಅಂಥ ಬ್ರಹ್ಮಾಂಡವ ಅರವತ್ತೊಂದುಸಾವಿರದ ಆರುನೂರಾ ಎಂಟು ಬ್ರಹ್ಮಾಂಡವನೊಳಕೊಂಡುದೊಂದು ಏಕಧೀರವೆಂಬ ಭುವನ. ಆ ಭುವನದೊಳು ಶಿಖಾಗ್ರದೃಷ್ಟಿಯೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಮುನ್ನೂರಾ ಐದುಕೋಟಿ ರುದ್ರ-ಬ್ರಹ್ಮ-ನಾರಾಯಣರಿಹರು. ಮುನ್ನೂರೈದುಕೋಟಿ ಇಂದ್ರಚಂದ್ರಾದಿತ್ಯರು ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.