Index   ವಚನ - 83    Search  
 
ಅಂಥ ಬ್ರಹ್ಮಾಂಡವ ಎಂಬತ್ತೊಂದುಸಾವಿರದಾ ಎಂಟನೂರಾ ಎಂಟು ಬ್ರಹ್ಮಾಂಡವನೊಳಕೊಂಡುದೊಂದು ಸ್ಥಲೇಶ್ವರವೆಂಬ ಭುವನ. ಆ ಭುವನದೊಳು ಜಟಾಜೂಟನೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ನಾನೂರೈದು ಕೋಟಿ ಬ್ರಹ್ಮ-ರುದ್ರ-ನಾರಾಯಣರಿಹರು. ನಾನೂರೈದುಕೋಟಿ ಇಂದ್ರ-ಚಂದ್ರಾದಿತ್ಯರು ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.