ಐದಾನೆಯ ಬೆನ್ನಲ್ಲಿ ಐದು ಒಂಟೆ ಹೋದವು,
ಒಂಬತ್ತು ಸಾವಿರ ಕುದುರೆಯನು ಒಂದು
ಎಳಗ ಎಯ್ದಿಸುತ್ತಿದ್ದಿತ್ತು.
ಅರೆಮರುಳಾದವನ ನೆರೆ ಮರುಳಾದವ ಬಲ್ಲನೆ?
ಕುರುಬ ಕುರಿಯ ಹಾಲ ಕರೆದು ಒಲೆಯ ಮೇಲಿಕ್ಕೆ,
ಇಕ್ಕಿದ ಹಾಲ ಬೆಕ್ಕು ಕುಡಿಯಿತ್ತು,
ಬೆಣ್ಣೆಯ ಮುಂದಿಟ್ಟುಕೊಂಡಳುತಿರ್ದ
ಕಾಣಾ ಗುಹೇಶ್ವರಾ.
Transliteration Aidāneya bennalli aidu oṇṭe hōdavu,
ombattu sāvira kudureyanu ondu
eḷaga eydisuttiddittu.
Aremaruḷādavana nere maruḷādava ballane?
Kuruba kuriya hāla karedu oleya mēlikke,
ikkida hāla bekku kuḍiyittu,
beṇṇeya mundiṭṭukoṇḍaḷutirda
kāṇā guhēśvarā.
Hindi Translation पाँच हाथी के पीछे पाँच ऊँठ गये ;
नौ हजार घोडों को एक भेडा मिलाता था ।
आधे पागल को पूर्ण पागल क्या जानता?
गडरिया बकरी का दूध दुहे चूल्हे पर रखे,
रखे दूध बिल्ली ने पिया था,
माखन सामने रखकर रोता देख गुहेश्वरा ।
Translated by: Eswara Sharma M and Govindarao B N