ಅಂಥ ಬ್ರಹ್ಮಾಂಡವ ಎಂಬತ್ತೆಂಟುಸಾವಿರದ ಎಂಟುನೂರಾ ಎಪ್ಪತ್ತೆಂಟು
ಬ್ರಹ್ಮಾಂಡವನೊಳಕೊಂಡುದೊಂದು ಛಂಗವೆಂಬ ಭುವನ.
ಆ ಭುವನದೊಳು ಚಕ್ರೇಶ್ವರನೆಂಬ ರುದ್ರಮೂರ್ತಿ ಇಹನು.
ಆ ರುದ್ರಮೂರ್ತಿಯ ಓಲಗದಲ್ಲಿ
ನಾನೂರಾ ನಲವತ್ತುಕೋಟಿ ವೇದಪುರುಷರು ಮುನೀಂದ್ರರು
ಇಂದ್ರ-ಚಂದ್ರಾದಿತ್ಯರು ದೇವರ್ಕಳಿಹರು ನೋಡಾ.
ನಾನೂರಾ ನಲವತ್ತುಕೋಟಿ ಬ್ರಹ್ಮ-ರುದ್ರ-ನಾರಾಯಣರಿಹರು ನೋಡಾ
ಅಪ್ರಮಾಣಕೂಡಲಸಂಗಮದೇವಾ.
Art
Manuscript
Music
Courtesy:
Transliteration
Antha brahmāṇḍava embatteṇṭusāvirada eṇṭunūrā eppatteṇṭu
brahmāṇḍavanoḷakoṇḍudondu chaṅgavemba bhuvana.
Ā bhuvanadoḷu cakrēśvaranemba rudramūrti ihanu.
Ā rudramūrtiya ōlagadalli
nānūrā nalavattukōṭi vēdapuruṣaru munīndraru
indra-candrādityaru dēvarkaḷiharu nōḍā.
Nānūrā nalavattukōṭi brahma-rudra-nārāyaṇariharu nōḍā
apramāṇakūḍalasaṅgamadēvā.