Index   ವಚನ - 93    Search  
 
ಅಂಥ ಬ್ರಹ್ಮಾಂಡವ ತೊಂಬತ್ತೊಂದುಸಾವಿರದ ಒಂಬತ್ತನೂರಾ ಎಂಟು ಬ್ರಹ್ಮಾಂಡವನೊಳಕೊಂಡುದೊಂದು ಸ್ವರ್ಣಾಕ್ಷವೆಂಬ ಭುವನ. ಆ ಭುವನದೊಳು ಅಕ್ಷಮಾಲಾಧರನೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ನಾನೂರೈವತ್ತೈದುಕೋಟಿ ನಾರಾಯಣ-ಬ್ರಹ್ಮ-ರುದ್ರಾದಿಗಳಿಹರು. ನಾನೂರೈವತ್ತೈದುಕೋಟಿ ಇಂದ್ರ ಚಂದ್ರಾದಿತ್ಯರು ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ. ಅಪ್ರಮಾಣಕೂಡಲಸಂಗಮದೇವಾ.