Index   ವಚನ - 98    Search  
 
ಅಂಥ ಬ್ರಹ್ಮಾಂಡವ ತೊಂಬತ್ತಾರುಸಾವಿರದ ಒಂಬೈನೂರಾ ಐವತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ವಸ್ತ್ರಾಪದವೆಂಬ ಭುವನ. ಆ ಭುವನದೊಳು ಮಹಾಕೋದಂಡನೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ನಾನೂರೆಂಬತ್ತುಕೋಟಿ ರುದ್ರ-ಬ್ರಹ್ಮ-ನಾರಾಯಣರಿಹರು. ನಾನೂರೆಂಬತ್ತುಕೋಟಿ ಇಂದ್ರ-ಚಂದ್ರಾದಿತ್ಯರು ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.