ವಚನ - 155     
 
ಕಾಮಾರಿಯ ಗೆಲಿದನು ಬಸವಾ ನಿಮ್ಮಿಂದ. ಸೋಮಧರನ ಹಿಡಿತಪ್ಪೆನು ಬಸವಾ ನಿಮ್ಮ ಕೃಪೆಯಿಂದ. ನಾಮದಲ್ಲಿ ಹೆಂಗೂಸೆಂಬ ಹೆಸರಾದಡೇನು? ಭಾವಿಸಲು ಗಂಡು ರೂಪು ಬಸವಾ ನಿಮ್ಮ ದಯದಿಂದ. ಅತಿಕಾಮಿ ಚೆನ್ನಮಲ್ಲಿಕಾರ್ಜುನಂಗೆ ತೊಡರಿಕ್ಕಿಎರಡುವರಿಯದೆ ಕೂಡಿದೆನು. ಬಸವಾ ನಿಮ್ಮ ಕೃಪೆಯಿಂದ.