ವಚನ - 222     
 
ತನುಶುದ್ಧ ಮನಶುದ್ಧ ಭಾವಶುದ್ಧ- ವಾದವರನೆನಗೊಮ್ಮೆ ತೋರಾ? ನಡೆಯೆಲ್ಲ ಸದಾಚಾರ; ನುಡಿಯೆಲ್ಲ ಶಿವಾಗಮ; ನಿತ್ಯಶುದ್ಧರಾದವರನೆನಗೊಮ್ಮೆ ತೋರಾ? ಕತ್ತಲೆಯ ಮೆಟ್ತಿ ತಳವೆಳಗಾಗಿ ಹೊರಗೊಳಗೊಂದಾಗಿ ನಿಂದ ನಿಮ್ಮ ಶರಣರನೆನಗೊಮ್ಮೆ ತೋರಾ ಚೆನ್ನಮಲ್ಲಿಕಾರ್ಜುನಾ.