ವಚನ - 233     
 
ದೂರದಲ್ಲಿಹನೆಂದು ಆನು ಬಾಯಾರಿ ಬಳಲುತಿರ್ದೆನಯ್ಯಾ. ಸಾರಿ ಬೆರಸಿ ಎನ್ನ ಕರಸ್ಥಲದಲ್ಲಿ ಮೂರ್ತಿಗೊಂಡಡೆ ಎನ್ನ ಆರತವೆಲ್ಲವೂ ಲಿಂಗ ನಿಮ್ಮಲ್ಲಿ ನಟ್ಟಿತು ನೋಡಯ್ಯಾ. ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮನು ಕರಸ್ಥಲದಲ್ಲಿ ನೋಡಿ ಕಂಗಳೆ ಪ್ರಾಣವಾಗಿರ್ದೆನಯ್ಯಾ.